ಹಳದಿ ಮಲ್ಲಿಗೆ (ಯೆಲ್ಲೋ ಜಾಸ್ಮಿನ್, ಇಟಾಲಿಯನ್ ಜಾಸ್ಮಿನ್, ನೇಪಾಳ ಜಾಸ್ಮಿನ್, ಜಾಸ್ಮಿನಮ್ ಹ್ಯೂಮೈಲ್) ಕಾಶ್ಮೀರದಿಂದ ನೇಪಾಳದವರೆಗೆ 3000 ಮೀ ಎತ್ತರದ ಹಿಮಾಲಯ ಪರ್ವತಶ್ರೇಣೆಯಲ್ಲೆಲ್ಲ ಕಾಣದೊರೆಯುತ್ತದೆ. ರಾಜಸ್ಥಾನದ ಆಬು ಬೆಟ್ಟ ಹಾಗೂ ದಕ್ಷಿಣ ಭಾರತದ ಬೆಟ್ಟಸೀಮೆಗಳಲ್ಲೂ ಉಂಟು. ಈ ಪ್ರಭೇದವನ್ನು ವ್ಯಾಪಕವಾಗಿ ಕೃಷಿಮಾಡಲಾಗುತ್ತದೆ ಮತ್ತು ಗ್ರೀಸ್, ಸಿಸಿಲಿ ಮತ್ತು ಹಿಂದಿನ ಯೂಗೊಸ್ಲಾವಿಯಾದಲ್ಲಿ ದೇಶೀಕರಿಸಲಾಗಿದೆ ಎಂದು ವರದಿಯಾಗಿದೆ. == ವಿವರಣೆ == ಮೇಲ್ಮುಖವಾಗಿ ಹಬ್ಬಿ ಬೆಳೆಯುವ ಪೊದೆ ಜಾತಿ ಇದು. ಹೂಗಳು ಹಳದಿ ಬಣ್ಣದವು; ರೆಂಬೆಗಳು ತುದಿಯಲ್ಲಿ ಸ್ಥಿರವಾಗಿರುವ ಸೀಮಾಕ್ಷಿ ಮಂಜರಿಗಳಲ್ಲಿ ಅರಳುವುವು. ಡಾರ್ಜಿಲಿಂಗ್ ಸುತ್ತಣ ಪ್ರದೇಶಗಳಲ್ಲಿ ಈ ಜಾತಿಯದು ಹೆಚ್ಚು ಹುಲುಸಾಗಿ ಬೆಳೆಯುತ್ತಿದ್ದು ದೀರ್ಘಕಾಲ ಹೂ ಬಿಡುವುದಲ್ಲದೆ ಬೀಜಗಳನ್ನೂ ಉತ್ಪಾದಿಸುತ್ತದೆ. == ಕೃಷಿ == ಇದನ್ನು ಬೀಜ ಇಲ್ಲವೆ ಕಡ್ಡಿಗಳ ಮೂಲಕ ವೃದ್ಧಿಸಲಾಗುತ್ತದೆ. == ಉಪಯೋಗಗಳು == ಇದರ ಬೇರಿನಿಂದ ಹಳದಿ ರಂಗನ್ನು ತಯಾರಿಸುವುದಿದೆ. ಬೇರು ಗಜಕರ್ಣದ ಚಿಕಿತ್ಸೆಗೆ ಒಳ್ಳೆಯದೆನ್ನಲಾಗಿದೆ. ತೊಗಟೆಯ ರಸ ಮೊಳೆರೋಗದ ನಿವಾರಣೆಗೆ ಬಳಕೆಯಾಗುತ್ತದೆ. == ಉಲ್ಲೇಖಗಳು ==